Wednesday, 31 July 2013

Ellello oduva manase song lyrics written in kannada- singer:Avinash chebbi music: Anoop selin

ಎಲ್ಲೆಲ್ಲೊ ಓಡುವ ಮನಸೇ
ಓ .. ಓ ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
ಹಾ ಹ ... ಹೋದಲ್ಲಿ ಬಂದಲ್ಲಿ ತರುವೆ
ಹರುಷವ ಮುಂದಿಡುವೆ
ವ್ಯಸನವ ಬೇಂಬಿಡುವೆ
ಬಂದರೂ ಅಳುವು ನಗಿಸಿ ನಲಿವ ಮನವೇ


ಎಲ್ಲೆಲ್ಲೊ ಓಡುವ ಮನಸೇ
ಓ .. ಓ ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
ಹಾ ಹ ... ಹೋದಲ್ಲಿ ಬಂದಲ್ಲಿ ತರುವೆ
  
ನಾನು ನನ್ನದೆನ್ನುವ ನಿನ್ನಯ ತರ್ಕವೇ ಬಾಲಿಷ
ಎಲ್ಲ ನನ್ನದೆನ್ನುವ ನಿನ್ನಯ ವರ್ಗವೇ ಅಂಕುಶ
ಕಲ್ಮಶ ನಿಷ್ಕಲ್ಮಶ ತರ ತರ ನಿನ್ನ ವೇಷ
ದ್ವಾದಶಿ ಏಕಾದಶಿ ಎಲ್ಲ ನಿನ್ನ ಖುಷಿ
ಇದ್ದರು ಜೊತೆಗೆ ದೂರ ಇರುವ ಮನವೇ


ಎಲ್ಲೆಲ್ಲೊ ಓಡುವ ಮನಸೇ
ಓ .. ಓ ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
ಹಾ ಹ ... ಹೋದಲ್ಲಿ ಬಂದಲ್ಲಿ ತರುವೆ


ಬೇಕು ಬೇಡ ಎನ್ನುವ ಗೊಂದಲ ಸೃಷ್ಟಿಸೋ ಮಾಯೆ ನೀ
ತಪ್ಪು ಒಪ್ಪು ಎಲ್ಲವ ತೋರುವ ಕಾಣದ ಛಾಯೆ ನೀ
ಕಲ್ಪನೆ ಪರಿಕಲ್ಪನೆ ವಿಧ ವಿಧ ನಿನ್ನ ತಾಣ
ಬಣ್ಣನೆ ಬದಲಾವಣೆ ಎಲ್ಲ ನಿನ್ನ ಹೊಣೆ
ಕಂಡರೂ ಸಾವು ಬದುಕು ಎನುವ ಮನವೇ


ಎಲ್ಲೆಲ್ಲೊ ಓಡುವ ಮನಸೇ
ಓ .. ಓ ಯಾಕಿಂತ ಹುಚ್ಚುಚ್ಚು ವರಸೆ
ಇಲ್ಲದ ಸಲ್ಲದ ತರಲೆ
ಹಾ ಹ ... ಹೋದಲ್ಲಿ ಬಂದಲ್ಲಿ ತರುವೆ

Monday, 29 July 2013

Chandra kannada film songs- Nee seleve song lyrics ...music: gautam srivatsa singer: Anurada bhat.

ನೀ  ಸೆಳೆವೆ ಬಿಡದೆ ನನ್ನನು………
||ಪಲ್ಲವಿ|| 
ನೀ ಬಳಿಯೇ ಇರುವ ಚಂದಿರ
ನೀ ಸೆಳೆವ ಪರಿಯೇ ಸುಂದರ ||ಪಲ್ಲವಿ||
||ಅನುಪಲ್ಲವಿ|| 
ಮನಮೊಹಿತ ನೀನು
ಮನಗಾಣಿಸಲೆನು
ಮೆಲ್ಲ ಮೆಲ್ಲ ಬರೋ ಮಳೆ ಹನಿ ನೀನು
ಇಲ್ಲೇ ಇಲ್ಲೇ ಇರೋ ಇನಿ ದನಿ ನೀನು
ಮನಮೊಹಿತ ನೀನು
ಮನಗಾಣಿಸಲೆನು ||ಅನುಪಲ್ಲವಿ|| 


||ಚರಣ|| 
ಸಾವಿರ ಮಾತನು ಪೊಣಿಸಲಾಗದ ಕೋಮಲ ಮೌನವಿದು
ಸುಮ್ಮನೆ ಒಂದೆಡೆ ಕೂರಿಸಲಾಗದ ಚಂಚಲ ದ್ಯಾನವಿದು .
ಓ ಜೀವದಾಳದಲಿ ಹಾಡು
ರೂಪ ತಾಳುತಿದೆ ನೋಡು
ಒಂದೇ ಮಾತಿನಲಿ ಹಿಂದೆ ನೋಡದೆಯೇ ಬಾ ನೀನು ...
ಬರೀ ಬಾವುಕ ನಾನು
ಬದಲಾಯಿಸಲೇನು ||ಚರಣ|| 


||ಚರಣ|| 
ಏನೆನ್ನೋ ಹೇಳಲು ಹೋಗಿ ನಾ ಏನೇನೋ ಹೇಳುವೆ ನಿನ್ನೆದುರು 
ಒಮ್ಮೆಯೂ ನಿನ್ನನು ಕಾಣದೆ ಹೋದರು ಸ್ವಪ್ನಕೂ ನಿಟ್ಟುಸಿರು
ಎಲ್ಲ ಗೋಡೆಗಳ ದಾಟಿ
ತೀವ್ರವಾಗುತಿದೆ ಪ್ರೀತಿ
ಚೂರು ದೂರವನ್ನು ಹೇಗೆ ತಾಳುವುದು ನಾ ಇನ್ನು
ತುದಿಗಾಲಲಿ ನಾನು
ತುಸು ಕಾಯಿಸಲೇನು ||ಚರಣ||  
ಮನಮೊಹಿತ ನೀನು
ಮನಗಾಣಿಸಲೆನು
ಮೆಲ್ಲ ಮೆಲ್ಲ ಬರೋ ಮಳೆ ಹನಿ ನೀನು
ಇಲ್ಲೇ ಇಲ್ಲೇ ಇರೋ ಇನಿ ದನಿ ನೀನು
ಮನಮೊಹಿತ ನೀನು
ಮನಗಾಣಿಸಲೆನು ..

Wednesday, 24 July 2013

Maduvana karedare song lyrics Music: Sadu kokila Lyrics: jayanth kaikini Singer:Chinmayi



||ಪಲ್ಲವಿ||

ಮಧುವನ ಕರೆದರೆ
ತನು ಮನ ಸೆಳೆದರೆ
ಶರಣಾಗು ನೀನು ಆದರೆ ... 


||ಅನುಪಲ್ಲವಿ||
ಬಿರುಗಾಳಿಯಲ್ಲಿ ತೇಲಿ
ಹೊಸ ಘಳಿಗೆ ಬಂದಿದೆ
ಕನಸೊಂದು ಮೈಯ ಮುರಿದು
ಬಾ ಬಳಿಗೆ ಎಂದಿದೇ
ಶರಣಾಗು ಆದರೆ
ಸೆರೆ ಆಗು ಆದರೆ
||ಪಲ್ಲವಿ||

||ಚರಣ||1||
ಕಂಗಳಲಿ  ಕನಸಿನ ಕುಲುಮೆ
ಹೊಳೆಯುತಿದೆ ಜೀವದ ಒಲುಮೆ
ಬೆಳಕಲ್ಲಿ ನೋಡು ಆದರೆ.......
ಮೈಯೆಲ್ಲಾ ಚಂದ್ರನ ಗುರುತು
ಹೆಸರೆಲ್ಲೊ ಹೋಗಿದೆ ಮರೆತು
ನಾನ್ಯಾರು ಹೇಳು ಆದರೆ 
||ಪಲ್ಲವಿ||

||ಚರಣ||2||
ಮನಸಿನ ಹಸಿ ಬಣ್ಣಗಳಲ್ಲಿ
ನೀನೆಳೆವಾ ರೇಖೆಗಳಲ್ಲಿ
ನಾ ಮೂಡಬೇಕು ಆದರೇ.....
ಎದುರಿದ್ದು ಕರೆಯುವೆ ಏಕೆ
ಜೊತೆಯಿದ್ದು ಮರೆಯುವೆ ಏಕೆ
ನಿನ್ನೊಲವು ನಿಜವೆ ಆದರೆ.....


||ಪಲ್ಲವಿ||
||ಅನುಪಲ್ಲವಿ||