Sunday, 11 December 2016

ಒಲವೊಂದು ಮೂಡಿರಲು ಕನಸಿನಲ್ಲಿ

ಸಭೆಯೊಂದು ನೆಡೆದಿರಲು ಸೃಷ್ಟಿಕರ್ತನ ಅಂಗಣದಲ್ಲಿ 
ಬಂದಿರಲು ರಾಜ ರವಿ ವರ್ಮ ತನ್ನ ಕಲಾ ಪುಂಜದೊಂದಿಗೆ 
ಬಿಡಿಸಿರಲು ಸುನಯನಳ ಕಣ್ಣುಗಳನ್ನು , ತಿದ್ದಿದನು ಆಕೆಯ ಕಾಮನಬಿಲ್ಲಿನಂತ ಉಬ್ಬುಗಳ್ಳನ್ನು 

ಬೆರಗಾದ ಸೃಷ್ಟಿಕರ್ತ , ಈ ಅಂದವಾದ ಆಕಾರಕ್ಕೆ 
ಜೀವವಿಲ್ಲವೇಕೆ ? ಯೋಚಿಸಲು 
ಕಂಡಿತು ಒಂದು ಅಮೋಘವಾದ ಅದ್ಬುತ ಜೀವವಿತ್ತೋಡನೆ 
ಕನಸಿಲ್ಲವೇಕೆ ?ಯೋಚಿಸಲು 
ಕಂಡಿತು ನೂರಾರು ಕನಸುಗಳು ಕಣ್ಣರೆಪ್ಪೆಗಳ ಅಂಚಿನಲ್ಲಿ 
ಇನಿಯನಿಲ್ಲನೇಕೆ ? ಕನಸೊಂದು ಕೇಳಿರಲು 
ಒಲವು ಮೂಡಿರಲು , ಬಯಕೆ ತೀರಿರಲು 
ಮನಸೇಂಬ ಗಾಳಿಪಟ ಹಾರಲು, ಹಾಡಲು... 

ರೆಕ್ಕೆ ತಪ್ಪಿದ ಭಾವನೆಗಳು , ಆ ಕನಸು ಮುರುಗುತ್ತಾ 
ರೆಪ್ಪೆಗಳ ದಡದಲ್ಲಿ ಭಾವನೆಯೆಂಬ ಸಾಗರದ ಭೋರ್ಗರೆತ 

ನನಸಾಗಲಿಲ್ಲವೇಕೆ ? ಸೃಷ್ಟಿಕರ್ತನಿಗೆ ಕೇಳಿರಲು 
ಕನಸು ನನ್ನದಾಗಿರಲು 
ಭಾವನೆಗಳು  ಕಾಣಸಿನದ್ದಾಗಿರಲು 
ಅರಿಯದೇ  ಮುಂದುವರಿದೆಯಾ ಓ ಕನಸೇ 
ಮತ್ತೊಮ್ಮೆ ಅಪ್ಪಳಿಸು ಒಲವೊಂದು ಕಾಯುತ್ತಿರಲು 

                                                                            -ಪುರು 

ನೆನಪುಗಳ ದೃಶ್ಯಕಾವ್ಯ

ಗರಿಗೆದರಿದ ನೆನಪುಗಳು , ದೃಶ್ಯ ಕಾವ್ಯ ರೂಪುಗೊಂಡಂತೆ 
ಹೃದಯ ಬಡಿದಂತೆ , ಮನಸ್ಸು ಏನೋ  ಹೇಳಲು ಚಡಪಡಿಸಿದಂತೆ 
ಅರಿಯದ ಭಾಷೆಯಲ್ಲಿ ಭಾವನೆಗಳು ವ್ಯಕ್ತವಾದಂತೆ 
ನೀನು ಕಡಲಾದಂತೆ , ನಿನ್ನ ಅಲೆಗಳನ್ನು ನೋಡುವ ತುಂಟ ಹುಡುಗ ನಾನಾದಂತೆ 
ಜಗವೆಲ್ಲ ಮಲಗಿದಂತೆ , ಸುಳ್ಳು ನೆಪವೊಡ್ಡಿ ನಾ ಎಚ್ಚರವಿದ್ದಂತೆ 

ಮನಸ್ಸು ಕೋಪಗೊಂಡಂತೆ , ಕಣ್ಮುಚ್ಚಲ್ಲು ಪ್ರಯತ್ನಿಸಿದಂತೆ 
ರೆಪ್ಪೆಗಳ ಅಂಚಿನಲ್ಲಿ ಹನಿಗೂಡಿದಂತೆ , ಪ್ರೀತಿಯ ಹಡಗು ಮುಳುಗಿದಂತೆ 
ಕಣ್ಮುಚ್ಚಿದರೂ ಕಾಣಿಸಿದಂತೆ, ಕಾಡಿಸಿದಂತೆ ,ಪ್ರೇಮಿಸಿದಂತೆ 
ಬಿಟ್ಟು ಹೋಗಲು ಹೇಳಿದೆಯಾ ಓ ಪ್ರೀತಿ 
ಚಿರನಿದ್ರೆಗೆ ಜಾರಿದಂತೆ ನೆನಪುಗಳ ದೃಶ್ಯಕಾವ್ಯ 

                                                                             -ಪುರು 

ಮತ್ತೆ ಮುಂಗಾರು

ಮತ್ತೆ ಮುಂಗಾರು ಬಂದಿರಲು ..
ಉಲ್ಲಾಸದಿಂದ ರೆಕ್ಕೆ ಬಿಚ್ಚಿರುವ ನವಿಲಿನ ನರ್ತನ ನಿಮ್ಮದಾಗಿರಲಿ
ಮೊಳಕೆಯೊಡೆದು ಗರಿಗೆದರಿದ ರಾಗಿಯ ಪೈರಿನ ಯವ್ವನ ನಿಮ್ಮದಾಗಿರಲಿ
ಪಸರಿಸಿದ ಹಸಿರಿನಂತೆ ನಿಮ್ಮ ನಗುವು ಆವರಿಸಲಿ
ಚಿಟ್ಟೆಗಳ ಬಣ್ಣದ ಅಹಂಕಾರದ ಸೌಂದರ್ಯ ನಿಮ್ಮದಾಗಿರಲಿ
ಸಮುದ್ರದ ರಂಗಿತರಂಗದಂತೆ ನಿಮ್ಮ ಜೀವನ ವರ್ಣಮಯವಾಗಿರಲಿ
                                         -ಪುರು